ದಿನಾಂಕ 10-06-2023 ರಂದು ರೊಜಾರಿಯೊ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ರೊಜಾರಿಯೊ ಸಭಾಂಗಣದಲ್ಲಿ ನಡೆಯಿತು .ಗೌರವ ರಕ್ಷೆಯೊಂದಿಗೆ ರಾಜ್ಯಪಾಲರ ಸ್ಥಾನದಲ್ಲಿರುವ ಶಾಲಾ ಮುಖ್ಯಸ್ಥೆಯಾಗಿರುವ ಶ್ರೀಮತಿ ಆಲಿಸ್ ಕೆ ಜೆ ಯವರನ್ನು ಬರಮಾಡಿಕೊಳ್ಳಲಾಯಿತು.ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ರಾಜ್ಯಪಾಲಾರಾದ ಗೌರವಾನ್ವಿತ ಶಾಲಾ ಮುಖ್ಯಸ್ಥೆ ಎಲ್ಲಾ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ವಿದ್ಯಾರ್ಥಿ ಸರಕಾರದ ಮಂತ್ರಿಗಳಾಗಿ
ಮುಖ್ಯಮಂತ್ರಿ - ಮಝ್ನ
ಉಪ ಮುಖ್ಯಮಂತ್ರಿ – ಹಾಜೀಕ್ ಹಬೀಬ್ ಶೇಖ್
ಸಭಾಪತಿ –ಹಸನ್ ರಾಹಿಲ್
ವಿರೋಧ ಪಕ್ಷದ ನಾಯಕ –ಅಬ್ದುಲ್ ಖಾದಿರ್
ಮತ್ತು ಇತರೆ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ಸರಕಾರದ ಮಂತ್ರಿಗಳು ವಿದ್ಯಾರ್ಥಿ ಸರಕಾರದ ಎಲ್ಲಾ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರವನ್ನು ಕೊಡುತ್ತೇವೆ ಮತ್ತು ಶಾಲಾ ಕೀರ್ತಿಗೆ ಭಂಗ ತರುವ ಕಾರ್ಯವನ್ನು ಎಂದೂ ಮಾಡುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿದರು.ರಾಜ್ಯಪಾಲರು 2023-2024 ನೇ ಶೈಕ್ಷಣಿಕ ವರುಷದ ಕಾರ್ಯ ಯೋಜನೆ ಹಾಗೂ ಸಾಧನೆ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದರು.ಮಂತ್ರಿಗಳ ಪರಿಚಯೊಂದಿಗೆ ಅವರು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಶಿಕ್ಷಕಿ ಲವೀನಾ ಕ್ವಾಡ್ರಸ್ ತಿಳಿಸಿದರು. ಶಿಕ್ಷಕಿ ಲವೀನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು .

 

 

 

 

Home | Parish | News | Sitemap | Contact

Copyright © 2013 www.rosariocathedral.org. All rights reserved.
Powered by eCreators