ರೊಜಾರಿಯೊ ಕಲ್ಚರಲ್ ಹಾಲ್ ನಲ್ಲಿ ರೊಜಾರಿಯೊ ಪ್ರೌಢಶಾಲೆ ಹಾಗೂ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ದಿನಾಚರಣೆಯು ಜಂಟಿಯಾಗಿ ದಿನಾಂಕ 04-09-2023 ರಂದು ನೆರವೇರಿತು. ಪ್ರಾರ್ಥನಾ ಗೀತೆಯೊಂದಿಗೆ ಶುಭದಿನವನ್ನು ಆರಂಭಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಸಂಚಾಲಕರಾದ ವಂದನೀಯ ಫಾಧರ್ ಅಲ್ಫ್ರೇಡ್ ಜೆ ಪಿಂಟೊ ರವರು ದೀಪ ಪ್ರಜ್ವಲನ ಗೈದು, s ಸರ್ವಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎಲ್ಲ ಶಿಕ್ಷಕ/ಶಿಕ್ಷಕಿ ಹಾಗೂ ಶಿಕ್ಷಕೇತರರರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಆಶೀರ್ವಾದಿಸಿದರು. ಮತ್ತು ಶಿಸ್ತಿನ ಜೀವನಕ್ಕೆ ಗುರುವೃಂದವು ಎಷ್ಟು ಮಹತವಪೂರ್ಣ ಎಂಬುದನ್ನು ತಿಳಿಸಿದರು.

ವಿದ್ಯಾರ್ಥಿ ಉಪನಾಯಕ ಹಾಜಿಕ್ ಹಬೀಬ್ ಶೇಕ್ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದನು. ನಂತರ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಶುಭಾಶಯ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಆಲಿಸ್ ಕೆ ಜೆ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಮೆಝಿಟಾ ಮಿನೇಜಸ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂಧಿಗಳು, ವಿದ್ಯಾರ್ಥಿ ನಾಯಕಿ ಮಝ್ನ, ವಿದ್ಯಾರ್ಥಿ ಮಂತ್ರಿ ಮಂಡಲದ ಪದಾಧಿಕಾರಿಗಳು ಸದಸ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಕಿತಾ ಸ್ವಾಗತಿಸಿ, ವಿದ್ಯಾರ್ಥಿನಿ ರಿದಾ ವಂದಿಸಿದರು. ವಿದ್ಯಾರ್ಥಿನಿ ಮಝ್ನ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

Home | Parish | News | Sitemap | Contact

Copyright © 2013 www.rosariocathedral.org. All rights reserved.
Powered by eCreators